News Cafe | ಮತ್ತೊಂದು ಸ್ವರೂಪ ಪಡೆದ ಈದ್ಗಾ ಮೈದಾನ ವಿವಾದ | HR Ranganath | Aug 8, 2022

2022-08-08 2

ಈದ್ಗಾ ಮೈದಾನದ ವಿವಾದ ಇದೀಗ ಮತ್ತೊಂದು ಸ್ವರೂಪ ಪಡೆದುಕೊಳ್ತಿದೆ. ಚಾಮರಾಜಪೇಟೆ ಆಟದ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಅನ್ನೋ ಆದೇಶವನ್ನ ಬಿಬಿಎಂಪಿ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಮೈದಾನದಲ್ಲಿ ಅದ್ದೂರಿಯಾಗಿ ಸ್ವಾತಂತ್ರ್ಯ ದಿನಾಚರಣೆಗೆ ನಾಗರೀಕ ಒಕ್ಕೂಟ ಸಿದ್ದತೆ ನಡೆಸಿದೆ. ಮೈದಾನದಲ್ಲಿ ತಿರಂಗಾ ಹಾರಿಸಿಯೇ ತೀರುತ್ತೇವೆ ಎಂದು ಪಟ್ಟು ಹಿಡಿದಿದ್ದು, ಯಾವುದೇ ಕಾರಣಕ್ಕೂ ಮೈದಾನದಲ್ಲಿ ವಕ್ರ್ಫ್ ಬೋರ್ಡ್‍ನಿಂದ ಆಚರಣೆಗೆ ಬಿಡುವುದಿಲ್ಲ ಎಂದು ನಾಗರೀಕರ ಒಕ್ಕೂಟ ಸವಾಲ್ ಹಾಕಿದೆ. ಇನ್ನು ಬಿಬಿಎಂಪಿ ಆದೇಶದಿಂದ ಕೆರಳಿರೋ ವಕ್ರ್ಫ್ ಬೋರ್ಡ್ ಮತ್ತು ಮುಸ್ಲಿಂ ಮುಖಂಡರು, ನಾವು ಕೂಡ ಮೈದಾನದಲ್ಲೇ ಸ್ವಾತಂತ್ರ್ಯ ದಿನಾಚರಣೆ ಮಾಡಿಯೇ ಮಾಡ್ತೇವೆ ಎಂದು ಪಣ ತೊಟ್ಟಿದ್ದಾರೆ. ನಮ್ಮ ಮನೆಯೊಳಗೆ ಬೇರೊಬ್ಬರು ಆಚರಣೆ ಮಾಡೋಕೆ ನಾವು ಬಿಡುವುದಿಲ್ಲ. ನಮ್ಮ ಶಾಂತಿ ಕೆಡೋಕೆ ಬಿಡಬೇಡಿ ಎಂಬ ಎಚ್ಚರಿಕೆಯನ್ನ ಸಹ ನೀಡಿದ್ದಾರೆ. ಇನ್ನು ಈ ಮಧ್ಯೆ ಮುನ್ನೆಚ್ಚರಿಕೆ ಕ್ರಮವಾಗಿ ಈದ್ಗಾ ಮೈದಾನದಲ್ಲಿ ಪೊಲೀಸ್ ಪಹರೆ ಹಾಗೇ ಇದೆ.

#publictv #newscafe #hrranganath